ಓಂ ಪ್ರಥಮ ಪ್ರಣವನೆ


ಓಂ ಪ್ರಥಮ ಪ್ರಣವನೆ 
ಹಿಡಿದಕೆಲಸ ಬಿಡದೆ ಮಾಡುವ |
ಬಿಡದೆ ನಿನ್ನ ದ್ಯಾನ ಮಾಡುವ 
ಮನುಜಗೊಲಿಯೊ ಪರಶಿವನಸುತನೆ ||

ಪಾಶ ಅಂಕುಶ ಧಾರಿಯೆ
ದಿನಕರ ಸ್ವರೂಪಿಯೆ |
ಬಿಡದೆ ಪೊರೆಯೊ ದೀನರ 
ಮೋದಕಪ್ರಿಯ ಕೃಪಾಳುವೆ ||

ಮುರಿದ ದಂತ ಹಿಡಿದ ಹಾವು 
ಅರಿಯೆನಯ್ಯ ಇದರ ಮರ್ಮ |
ಭಕುತಿಯಿಂದ ತಿಳಿವು ಬೇಡುವೆ 
ತಿಳಿಸಿಹೇಳೊ ಅರಿವಿನೊಡೆಯ|| 

- ಪಾರ್ಥಸಾರಥಿರುದ್ರವೀಣೆಯು ಈ ದೇಹ

ರುದ್ರವೀಣೆಯು ಈ ದೇಹ 
ನುಡಿಸುವ ರಾಗ ನಿನ್ನದೇ ಭಾವ !

ಶೃತಿ ಅಪಶೃತಿಗಳ ಚಿಂತೆ ನನಗಿಲ್ಲ
ನುಡಿಸುವನೇ ಬಾಧ್ಯ, ನಿನ್ನದೇ ಎಲ್ಲ !

ರಾಗವೋ ಅನುರಾಗವೋ 
ಭೂತಿಯೋ ಅನುಭೂತಿಯೋ
ಆದಿ ಅಂತ್ಯಗಳಿಲ್ಲದ ವಾದ
ಸೇರುವುದೆಲ್ಲವೂ ನಿನ್ನದೇ ಪಾದ

- ಪಾರ್ಥಸಾರಥಿ

ಶ್ರೀ ಗಣೇಶಶ್ರೀ ಗಣೇಶ ,    ಶ್ರೀರಾಮ ದೇವಾಲಯ , ದೊಡ್ಡನಾರವಂಗಲ ಗ್ರಾಮ , ತುಮಕೂರು ಜಿಲ್ಲೆ 

ಮಹಿಷಾಸುರ ಮರ್ಧಿನಿ ಅಮ್ಮನವರು , ಮೆರವಣಿಗೆಯ ರೂಪಮಹಿಷಾಸುರ ಮರ್ಧಿನಿ ಅಮ್ಮನವರು , ಮೆರವಣಿಗೆಯ ರೂಪ , ದೊಡ್ಡನಾರವಂಗಲ ಗ್ರಾಮ ತುಮಕೂರು ಜಿಲ್ಲೆ 

ಕುಣಿಯುತ ನಲಿಯುತ ಬಾ ಶಂಕರ

ಕುಣಿಯುತ ನಲಿಯುತ ಬಾ ಶಂಕರ
ಮಣಿಯುವೆ ನಿನ್ನಡಿಗನುದಿನ ಮುರಹರ ||
ಢಣಢಣ ಢಣಢಣ ಎಂದು ಡಮರುಗ ಧ್ವನಿಸಲು
ಠಣಠಣಠಣ ಎಂದು ವೃಷಭವು ನಲಿಯೇ
ಝುಣತಕ ತಕಝುಣ ತಾಕಿಟ ತಕ ಕಿಟ
ಝುಣ ಎಂದು ನಂದಿ ಮೃದಂಗವ ಬಾರಿಸಲು ||೧||
ಹರಹರಹರಹರ ಎಂದು ಗಣಗಳು ಸ್ತುತಿಸಲು
ಪೊರೆಯಂದಹಿವಿದ್ದು ಗಂಗೆಯು ನಮಿಸೆ
ಸರಿಗಮಪದನಿಸ ಸ್ವರಗಳ ಪಾಡುತ
ನಾರದ ತುಂಬುರ ಗಾನವ ಮಾಡಲು ||೨||
ವರಕಮಲೇಶನ ಚರಿತೆಯ ಜಗದೊಳು
ಪರಿಪರಿ ಭಾವದಿ ನರ್ತಿಸಿ ತೋರುತ
ಪೊರೆಯುತ ಭಕುತರ ವರವೀಯುತ ಬಾ
ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||

ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು)


ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು)
ಮನವ ಶೋಧಿಸಬೇಕೋ ನಿಚ್ಚ
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ ||
ಧರ್ಮ-ಅಧರ್ಮ ವಿಂಗಡಿಸಿ ನೀ
ಅಧರ್ಮದ ನರಗಳ ಬೇರೆ ಕತ್ತರಿಸಿ
ನಿರ್ಮಲಾಚಾರವ ಚರಿಸಿ ಪರ
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ ||
ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿ
ನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ ||
ಆತನ್ನ ನಂಬಿ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರೆ ಕೇಳಿರೆಲ್ಲ ನಮ-
ಗಾತನೆ ಗತಿಯೀವ ಪುರಂದರ ವಿಠಲ || ೩ |