ಸರಿ, ತಪ್ಪುಗಳ ಮಾಯೆ (ಶ್ರೀ ನರಸಿಂಹ 26)

 [ರಚನೆ ಸತೀಶ ತುಮಕೂರು]


ನಡೆಯುತಿಹ ಘಟನೆಗಳ ನೋಡಿ ಸರಿ,ತಪ್ಪು ಎನ್ನದಿರು
ಸರಿ,ತಪ್ಪುಗಳನು ನಿನ್ನಮನಸಿನ ನೇರದಲಿ ನೋಡದಿರು
ನಿನಗೆ ಸರಿ  ಎಂದೆನಿಸಿದುದು ಸರಿಯು ಎಂದೇನು ಅಲ್ಲ
ತಪ್ಪು ಎಂದೆನಿಸುವುದು ತಪ್ಪಾಗಿಹುದು ಎಂದೇನು ಅಲ್ಲ
ಇಂದಿನ ಸರಿ ಅದು ಮುಂದೊಮ್ಮೆ ತಪ್ಪಾಗಿ ಕಾಣುವುದು
ಇಂದು ತಪ್ಪಾಗಿಹುದು ಮುಂದೊಮ್ಮೆ ಸರಿ ಎನಿಸುವುದು
ಸರಿ,ತಪ್ಪುಗಳೆಂಬುದೆಲ್ಲವೂ ನಮ್ಮ ಮನಸಿನ ತರ್ಕವು
ನನ್ನದೆ ಸರಿ ಎನುತಲಿ ವಾದಮಾಡಲದುವೆ ಕುತರ್ಕವು
ಆತ್ಮ ಸಾಕ್ಷಿಗೆ ಎದುರಾಗಿ ಕರ್ಮಗಳಾವುದನು ನೀ ಮಾಡದಿರು
ಎಲ್ಲರೊಳಗಿದ್ದು ಎಲ್ಲ ನೋಡುತಿಹ ಶ್ರೀನರಸಿಂಹ ಮರೆಯದಿರು

No comments:

Post a Comment