ಇಂದು ಎನಗೆ ಗೋವಿಂದ


ಇಂದು ಎನಗೆ ಗೋವಿಂದ


ಇಂದು ಎನಗೆ ಗೋವಿಂದ ನಿನ್ನಯ ಪಾದಾರ
ವಿಂದವ ತೋರೋ ಮುಕುಂದನೇ || ಪ ||
ಸುಂದರವದನನೇ ನಂದಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರೆರಮಣ || ಅ.ಪ ||
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನೆಂತೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪಜನಕನೇ || ೧ ||
ಮೂಢತನದಿ ಬಲು ಹೇಡಿಜೀವ ನಾನಾಗಿ
ದೃಢ ಭಕುತಿಯನ್ನು ಮಾಡಲಿಲ್ಲವೋ ಹರಿಯೆ
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೋ ನಿನ್ನ || ೨ ||
ಧಾರುಣಿಯೊಳು ಬಲು ಭಾರ ಜೀವನನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೋ ಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ || ೩ ||

2 comments:

  1. ನನ್ನ ನೆಚ್ಚಿನ ಹಾಡು.ನೆ.ಲ.ರಾಂ

    ReplyDelete
  2. ನನ್ನ ನೆಚ್ಚಿನ ಹಾಡು.ನೆ.ಲ.ರಾಂ

    ReplyDelete