ಆನೆ ಬಂದಿತಮ್ಮ

ಆನೆ ಬಂದಿತಮ್ಮ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಕಪಟನಾಟಕದ ಮರಿಯಾನೆ
ನಿಕಟ ಸಭೆಯಲಿ ನಿಂತಾನೆ
ಶಕಟನ ಭಂಡಿಯ ಮುರಿದಾನೆ
ಕಪಟನಾಟಕದಿಂದ ಸೋದರ ಮಾವನ
ನಕಟಕಟೆನ್ನದೆ ಕೊಂದಾನೆ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ನೀಲು ಭುವನವನು ಉಂಡಾನೆ
ಸ್ವಾಮಿ ಬಾಲಕನೆಂಬೋ ಚೆಲುವಾನೆ
ಬಲಗೋವುಗಳ ಕೂಡ ನಲಿದಾನೆ
ಚೆಲುವ ಕಾಳಿಂಗನ ಹೆಡೆಯಲಾಡುತ
ಪದಸೊಕ್ಕಿ ಬರುತಾನೆ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಭೀಮಾರ್ಜುನರನು ಗೆಲಿಸ್ಯಾನೆ
ಪರಮಭಾಗವತರ ಪ್ರಿಯದಾನೆ
ಮುದದಿಂದ ಮಧುರೆಲಿ ನಿಂತಾನೆ
ಮದಮುಖದ ಸುರರ ದಿಗಿಲಿಟ್ಟುಕೊಂಬ
ಪುರಂದರವಿಠ್ಠಲನೆಂಬಾನೆ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

2 comments:

  1. ಈ ಪುಟವು ಚೆನ್ನಾಗಿದೆ..........
    ತುಂಬಾ ಸಂತೋಷವಾಯಿತು....

    ReplyDelete
  2. This comment has been removed by the author.

    ReplyDelete