ಕೋಪವೆನ್ನುವ ಮಾಯೆ (ಶ್ರೀ ನರಸಿಂಹ ೩೩)

ರಚನೆ : ಸತೀಶ , ತುಮಕೂರು

ಕೋಪದಲಿ ಮನಸಿರಲು ಯೋಚಿಪ ಶಕ್ತಿ ನಶಿಸುವುದು
ಬುದ್ದಿ ಶೂನ್ಯವಾಗಿ  ಮನಸಿನ ಹಿಡಿತವದು ತಪ್ಪುವುದು
ಕೋಪ ಎಂಬುವುದೇ ಎಲ್ಲ ಅನರ್ಥಗಳಿಗೆ ಕಾರಣವು
ಸಾಧಕನ ಸಾಧನಾ ಪಥದಲ್ಲಿ ಬಹು ದೊಡ್ಡ ಬಾದಕವು

ನಮ್ಮಿಚ್ಚೆಯಂತೇನು ನಡೆಯದಿಲ್ಲಿ ಎಂಬರಿವಿರಬೇಕು
ಸ್ತುತಿ,ನಿಂದೆಗಳೆರಡನು ಸಮದಲ್ಲಿ  ಸ್ವೀಕರಿಸಬೇಕು
ಕೋಪವೆಂಬುದು ಬಂದಾಗ ಮೌನದಲಿರುವುದೆ ಲೇಸು
ಸಾಧನೆ ಹಾದಿಯಲಿ ಮೇಲೇರೆ ಕೋಪವನು ನಿಗ್ರಹಿಸು

ತಾಳ್ಮೆಯಿಂದಲಿ ಜೀವನದಿ ಬರುವುದೆಲ್ಲವನು ನೀ ಎದುರಿಸಬೇಕು
ನಂಬು ಶ್ರೀ ನರಸಿಂಹನ ತೋರುವ ಆತ್ಮಸಾಕ್ಷಾತ್ಕಾರದ ಬೆಳ

No comments:

Post a Comment