ದೇವಿ ಸ್ತುತಿ (ಅರ್ಥ ಸಹಿತ)

ದೇವೀಸ್ತುತಿ
ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿ ವಿಷ್ಣು ಮಾಯೆಯೆಂದು ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ಚೇತನೇತ್ಯಭಿಧೀಯತೇ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿ ಚೈತನ್ಯದ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿ ಶಕ್ತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿ ಶಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ಶ್ರದ್ಧಾ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿ ಶ್ರದ್ಧೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ಕಾಂತಿ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವೀ ಕಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿ ದಯೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿ ಮಾತೃ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ
ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.

ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥಸಾಧಿಕೆ |ಶರಣ್ಯೆ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||

ಸರ್ವಮಂಗಲಮಯೀ ಶಿವೇ ಸಕಲಾಭಿಷ್ಟ ಸಾಧಿಕೇ
ಆತ್ರಯದಾತೆಯೆ, ತ್ರಿಯಂಬಕೆ, ಗೌರಿ, ನಾರಾಯಣಿ ನಿನಗಿದೋ ನಮ್ಮ ನಮಸ್ಕಾರ.

ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ |ಗುಣಾಶ್ರಯೇsಗಣಮಯೇ ನಾರಾಯಣಿ ನಮೋಸ್ತು ತೇ ||

ಸೃಷ್ಟಿಸ್ಥಿತಿ ವಿನಾಶಕಾರಣಿ, ಶಕ್ತಿಮಯೀ ದೇವಿ.
ತ್ರಿಗುಣಾತ್ಮಕೆಯಾಗಿಯೂ ಅದನ್ನು ಮೀರಿಹೆ, ನಿನಗಿದೋ ನಮ್ಮ ನಮಸ್ಕಾರ.

ಶರಣಾಗತದೀನಾರ್ತ ಪರಿತ್ರಾಣ ಪರಾಯಣೇ |ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತು ತೇ ||

ಶರಣು ಬಂದ ದೀನರಿಗೂ ಆರ್ತರಿಗೂ ನೀನೆ ಶರಣು ದೇವಿ
ಎಲ್ಲ ಜೀವಿಗಳ ಎಲ್ಲ ದಃಖವನ್ನೂ ಪರಿಹರಿಪ ನಿನಗಿದೋ ನಮ್ಮ ನಮಸ್ಕಾರ.

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ |ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ ||

ಎಲ್ಲ ಶಕ್ತಿಗಳ ಪಡೆದಿರುವಾಕೆಯೆ, ಎಲ್ಲಕ್ಕೂ ಒಡತಿಯೆ,
ಎಲ್ಲವೂ ನೀನೆ ಆಗಿರುವೆ
ಓ ದುರ್ಗೆಯೆ, ಓ ದೇವಿಯೆ ಭಯವನ್ನು ತಪ್ಪಿಸು.
ನಿನಗಿದೋ ನಮ್ಮ ನಮಸ್ಕಾರ.
ದೇವೀ ಮಹಾತ್ಮ್ಯ

(ಮೂಲ ಕಣಜ) 

No comments:

Post a Comment