ಕಷ್ಟ-ಸಮಸ್ಯೆಗಳು (ಶ್ರೀ ನರಸಿಂಹ 35)

 ರಚನೆ : ಸತೀಶ ತುಮಕೂರು


ತನಗಿಹ ಕಷ್ಟ,ಸಮಸ್ಯೆಗಳನೆ ಮನವು ಹಿರಿದೆಂದೆನುವುದು
ಪರಿಹಾರವೇನಿದಕೆಂದು ಹಲವು ದಾರಿಗಳ ಹುಡುಕುವುದು
ತಾಳ್ಮೆಯ ಕಳೆದು ಕೊಳ್ಳುವುದು ಮನಸು ಯೋಚನೆಯಲ್ಲಿ
ಸಹಿಸಲಾಗದೆ ಹುಟ್ಟುವುದು ಸಾವಿನ ಯೋಚನೆ ಮನದಲ್ಲಿ
 
ತನ್ನ ಕಷ್ಟಗಳೆ ಹಿರಿದೆನುತ ಮನಸಿನಲಿ ಕೊರಗುವುದು ಸಲ್ಲ
ಪರರ ಕಷ್ಟಗಳ ಅರಿತರೆ ಕಿರಿದೆನಿಸುವುದು ತನ್ನ ಕಷ್ಟಗಳೆಲ್ಲ
ಕಷ್ಟಗಳು,ಸಮಸ್ಯೆಗಳು ಎಂಬುದಿಹವು ಎಲ್ಲರ ಜೀವನದಲ್ಲಿ
ಎಲ್ಲವನು ಪರಿಹರಿಸಿ ಸಲಹುವನು ಶ್ರೀಹರಿ,ತಾಳ್ಮೆಯಿದ್ದಲ್ಲಿ
 
ಜೀವನದ ಕಷ್ಟಗಳೆಲ್ಲ ಸೂರ್ಯನಿಗೆ ಮುಸುಕುವ ಮೋಡದ ತೆರದಿ
ಶ್ರೀನರಸಿಂಹನ ಕೃಪೆಯ  ಗಾಳಿ ಬೀಸಲು ಕಷ್ಟಗಳೆಲ್ಲಿಹುದು ಭವದಿ

No comments:

Post a Comment