ಕರ್ಮ,ಬಂಧಗಳು ರೋಗ,ರುಜಿನಗಳು (ಶ್ರೀನರಸಿಂಹ-25)

ರಚನೆ : ಸತೀಶ್ ತುಮಕೂರು
 
ರೋಗ,ರುಜಿನಗಳೆಂಬುವವು ದೇಹಕಂಟುವ ತೆರದಿ
ಪ್ರಾಪ್ತ ಕರ್ಮಗಳ,ಬಂಧಗಳ ಪಡೆವೆವು ಜೀವನದಿ
ಹುಟ್ಟಿನೊಂದಿಗೆ,ಬೆಳೆದಂತೆ ದೇಹಕವು ಬರುವಂತೆ
ಜೀವನದಲಿ ಪಡೆವ ಕರ್ಮಗಳು,ಬಂಧಗಳು ಅಂತೆ
 
ಬಯಸಿ ರೋಗ,ರುಜಿನಗಳ ನಾವು ಪಡೆಯುವುದಿಲ್ಲ
ಪ್ರಾಪ್ತ ಕರ್ಮಗಳು,ಬಂಧಗಳು ಕೂಡ ನಮ್ಮಿಚ್ಚೆಯಲ್ಲ
ಕಾಯಿಲೆಗಳನು ಹೋಗಿಸಲು ಬೇಕಿಹುದು ಔಷದಿಯು
ಕರ್ಮ,ಬಂಧಗಳಿಗಂಟದಂತಿರಲದುವೆ ಸಾಧನೆಯು
 
ರೋಗ,ರುಜಿನಗಳ,ಕರ್ಮ,ಬಂಧಗಳ ಚಿಂತೆಯಲಿ ಕೊರಗದಿರು
ಎಲ್ಲ ಕ್ಲೇಷಗಳ ಕಳೆವ ಶ್ರೀನರಸಿಂಹನ ಸ್ಮರಣೆಯ ಮರೆಯದಿರು

No comments:

Post a Comment