Showing posts with label ಭಕ್ತಿಗೀತೆ-ಸ್ತೋತ್ರಗಳು. Show all posts
Showing posts with label ಭಕ್ತಿಗೀತೆ-ಸ್ತೋತ್ರಗಳು. Show all posts

ಓಂ ಪ್ರಥಮ ಪ್ರಣವನೆ


ಓಂ ಪ್ರಥಮ ಪ್ರಣವನೆ 
ಹಿಡಿದಕೆಲಸ ಬಿಡದೆ ಮಾಡುವ |
ಬಿಡದೆ ನಿನ್ನ ದ್ಯಾನ ಮಾಡುವ 
ಮನುಜಗೊಲಿಯೊ ಪರಶಿವನಸುತನೆ ||

ಪಾಶ ಅಂಕುಶ ಧಾರಿಯೆ
ದಿನಕರ ಸ್ವರೂಪಿಯೆ |
ಬಿಡದೆ ಪೊರೆಯೊ ದೀನರ 
ಮೋದಕಪ್ರಿಯ ಕೃಪಾಳುವೆ ||

ಮುರಿದ ದಂತ ಹಿಡಿದ ಹಾವು 
ಅರಿಯೆನಯ್ಯ ಇದರ ಮರ್ಮ |
ಭಕುತಿಯಿಂದ ತಿಳಿವು ಬೇಡುವೆ 
ತಿಳಿಸಿಹೇಳೊ ಅರಿವಿನೊಡೆಯ|| 

- ಪಾರ್ಥಸಾರಥಿ



ರುದ್ರವೀಣೆಯು ಈ ದೇಹ

ರುದ್ರವೀಣೆಯು ಈ ದೇಹ 
ನುಡಿಸುವ ರಾಗ ನಿನ್ನದೇ ಭಾವ !

ಶೃತಿ ಅಪಶೃತಿಗಳ ಚಿಂತೆ ನನಗಿಲ್ಲ
ನುಡಿಸುವನೇ ಬಾಧ್ಯ, ನಿನ್ನದೇ ಎಲ್ಲ !

ರಾಗವೋ ಅನುರಾಗವೋ 
ಭೂತಿಯೋ ಅನುಭೂತಿಯೋ
ಆದಿ ಅಂತ್ಯಗಳಿಲ್ಲದ ವಾದ
ಸೇರುವುದೆಲ್ಲವೂ ನಿನ್ನದೇ ಪಾದ

- ಪಾರ್ಥಸಾರಥಿ

ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು)


ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು)












ಮನವ ಶೋಧಿಸಬೇಕೋ ನಿಚ್ಚ
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ ||
ಧರ್ಮ-ಅಧರ್ಮ ವಿಂಗಡಿಸಿ ನೀ
ಅಧರ್ಮದ ನರಗಳ ಬೇರೆ ಕತ್ತರಿಸಿ
ನಿರ್ಮಲಾಚಾರವ ಚರಿಸಿ ಪರ
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ ||
ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿ
ನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ ||
ಆತನ್ನ ನಂಬಿ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರೆ ಕೇಳಿರೆಲ್ಲ ನಮ-
ಗಾತನೆ ಗತಿಯೀವ ಪುರಂದರ ವಿಠಲ || ೩ |

ಶ್ರೀರಾಮಪಂಚಕಮ್ (ಶ್ರೀವಾದಿರಾಜತೀರ್ಥರು)
















 ಶ್ರೀರಾಮಪಂಚಕಮ್ (ಶ್ರೀವಾದಿರಾಜತೀರ್ಥರು)
ಪ್ರಾತಃ ಸ್ಮರಾಮಿ ರಘುನಾಥಪದಾರವಿಂದಂ
ಮಂದಸ್ಮಿತಂ ಮಧುರಭಾಷವಿಶಾಲಫಾಲಮ್ |
ಕರ್ಣಾವಲಂಬಿಚಲಕುಂಡಲಲೋಲಗಂಡಂ
ಕರ್ಣಾಂತದೀರ್ಘನಯನಂ ನಯನಾಭಿರಾಮಮ್ || ೧ ||
ಪ್ರಾತರ್ಭಜಾಮಿ ರಘುನಾಥಪದಾರವಿಂದಂ
ರಕ್ಷೋಗಣಾಯ ಭಯದಂ ವರದಂ ದ್ವಿಜೇಭ್ಯಃ |
ಯದ್ರಾಜ್ಯಸಂಸದಿ ವಿಭಜ್ಯ ಮಹೇಶಚಾಪಂ
ಸೀತಾಕರಗ್ರಹಣಮಂಡಲಮಾಪ ಸದ್ಯಃ || ೨ ||
ಪ್ರಾತರ್ನಮಾಮಿ ರಘುನಾಥಪದಾರವಿಂದಂ
ವಜ್ರಾಂಕುಶಾದಿಶುಭರೇಖಧ್ವಜಾವಹಂ ಮೇ |
ಯೋಗೀಂದ್ರಮಾನಸಮಧುವ್ರತಸೇವ್ಯಮಾನಂ
ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || ೩ ||
ಪ್ರಾತಃ ಶ್ರಯೇ ಶ್ರುತಿನುತಾಂ ರಘುನಾಥಕೀರ್ತಿಂ
ನೀಲಾಂಬುದೋತ್ಪಲಸಿತೇತರರತ್ನನೀಲಾಮ್ |
ಆಮುಕ್ತಮೌಲಿಕವಿಭೂಷಣಭೂಷಣಾಢ್ಯಾಂ
ಧ್ಯೇಯಾಂ ಸಮಸ್ತಮುನಿಭಿರ್ಜನಮೃತ್ಯುಹಂತ್ರೀಮ್ || ೪ ||
ಪ್ರಾತರ್ವದಾಮಿ ವಚಸಾ ರಘುನಾಥನಾಮ
ವಾಗ್ದೋಷಹಾರಿ ಸಕಲಂ ಶಮಲಂ ನಿಹಂತಿ |
ಯತ್ಪಾರ್ವತೀ ಸ್ವಪತಿನಾ ಸಹ ಭೋಕ್ತುಕಾಮಾ
ಪ್ರೀತ್ಯಾ ಸಹಸ್ರಹರಿನಾಮಸಮಂ ಜಜಾಪ || ೫ ||
ಯಃ ಶ್ಲೋಕಪಂಚಕಮಿದಂ ನಿಯತಂ ಪಠೇದ್ಯಃ
ಪ್ರಾತಃ ಪ್ರಭಾತಸಮಯೇ ಪುರುಷಃ ಪ್ರಬುದ್ಧಃ |
ಶ್ರೀರಾಮಕಿಂಕರಜನೇಷು ಸ ಏವ ಮುಖ್ಯೋ
ಭೂತ್ವಾ ಪ್ರಯಾತಿ ಹರಿಲೋಕಮನನ್ಯಲಭ್ಯಮ್ || ೬ ||
ವಾದಿರಾಜಯತಿಪ್ರೋಕ್ತಂ ಪಂಚಕಂ ಜಾನಕೀಪತೇಃ |
ಶ್ರವಣಾತ್ ಸರ್ವಪಪಘ್ನಂ ಪಠನಾನ್ಮುಕ್ತಿದಾಯಕಮ್ || ೭ ||
|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ಶ್ರೀರಾಮಪಂಚಕಂ ಸಂಪೂರ್ಣಮ್ ||

ಶರಣು ಶರಣಯ್ಯ ಶರಣು ಬೆನಕ

 ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ  
ಗರಿಗೆ ತಂದರೆ ನೀನು ….. 
ಗರಿಗೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳ

ಲಾಲಿಸಿದಳು ಮಗನ ಯಶೋದೆ

ರಚನೆ : ಪುರಂದರ ದಾಸರು



ಲಾಲಿಸಿದಳು ಮಗನ ಯಶೋದೆ 

ಲಾಲಿಸಿದಳು ಮಗನ 

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು 
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ||  

ಬಾಲಕನೆ ಕೆನೆ ಹಾಲು ಮೊಸರನೀವೇ 
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು || 

ಮುಗುಳುನಗೆಯಿಂದ ಮುದ್ದು ತಾತಾರೆಂದು 
ಜಗದೊಡೆಯನೇ ಶ್ರೀಪುರಂದರ ವಿಠಲನ || 

ನೋಡು ನೋಡು ಕಣ್ಣಾರ ನಿಂತಿಹಳು


ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು ಮಮತೆಯಿಂದ
ಬಾ ಇಲ್ಲಿ ಓ ಕಂದ ಎನುತಿಹಳೂ
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಷಾಸುರಮರ್ಧಿನಿಯ ವೈಭವ ಲೀಲೆ
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ನಂಬಿರುವ ಭಕ್ತರ ರಕ್ಷೆಗಾಗಿ 
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ಉಕ್ಕಿಬಹ ನದಿಯಲ್ಲೇ ಅವಳನಗೆ
ಬೀಸಿಬಹ ಗಾಳಿಯಲೇ ಅವಳುಸಿರು
ಹಸಿಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ಸಾಹಿತ್ಯ:  ಆರ್. ಎನ್. ಜಯಗೋಪಾಲ್


ಬಾಲಕನಾಗಿ ಬಂದಾ ನೋಡು



ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ತುಂಗಾ ತೀರದಿ ಬಾಲಕ್ರಿಷ್ಣನು
ಕೊಳಲನೂದಲು ಮೋಹಗೊಂಡನು
ಎಲ್ಲ ಮರೆತು ಉಲ್ಲಾಸದಿಂದಲಿ
ಕಾಣಲೆಂದು ಓಡೋಡಿ ಬಂದನು

ಸಂಧ್ಯೆಯು ಆರತಿ ಎತ್ತಿರುವಾಗ
ತಣ್ಣನೆ ಗಾಳಿ ಬೀಸಿರುವಾಗ
ಮುರಳಿಲೋಲನ ಸ್ವರ ಕೇಳುತ
ಗೋವುಗಳು ತಲೆದೂಗಿರುವಾಗ

ರಾಘವೇಂದ್ರನ ಕಂಡ ಮುಕುಂದ
ಇಬ್ಬರ ಮನದಲು ಬಲು ಆನಂದ
ಒಬ್ಬರನೊಬ್ಬರು ಅಪ್ಪಿ ನಲಿದರು
ಸರಸವಾಡುವ ಸಂಭ್ರಮದಿಂದ

ಮುತ್ತು ರತ್ನದ ಹಾರ ಅವನಲಿ
ತುಳಸಿ ಮಣಿಗಳ ಮಾಲೆ ಇವನಲಿ
ಝಗ ಝಗಿಸುವ ಪೀತಾಂಬರವಲ್ಲಿ
ಬಾಲಯೋಗಿ ಸನ್ಯಾಸಿ ಉಡುಪಲಿ

ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ಸಾಹಿತ್ಯ: ಚಿ. ಉದಯಶಂಕರ



ನಾರಾಯಣ ನಿನ್ನ ನಾಮದ ಸ್ಮರಣೆಯ


ನಾರಾಯಣ ನಿನ್ನ ನಾಮದ ಸ್ಮರಣೆಯ


ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ |
ಎಷ್ಟಾದರೂ ಮತಿಗೆಟ್ಟು ಇರಲಿ |
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾಮಂತ್ರ ಒಂದಿರಲಿ ||1||

ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಗದ ಒಳಗಿರಿಸಿ (ಒಳಗೆ ಇಟ್ಟು)
ಎಂತೋ ಪುರಂದರ ವಿಟ್ಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ ||2||

ಶರಣು ಗುರುರಾಜ

ಶರಣು  ಗುರುರಾಜ


ಶರಣು  ಗುರುರಾಜ  ಶರಣು  ರವಿ  ತೇಜ
ನಂಬಿದವರ  ಬೇಡಿಕೆಗಳ  ನೀಡುವಂಥ ಯೋಗಿ ರಾಜ  II ಪ  II
ತುಂಗಾ ನದಿಯ  ತೀರವಾಸಿ ವರಮಂತ್ರಾಲಯ  ತಾಪಸಿ
ಬೃಂದಾವನ  ಜ್ಯೋತಿ  ರೂಪ  ನೀವೇ  ನಮಗೆ ದಾರಿದೀಪ  II ಶರಣು  II
ಗುರುವು  ನೀವೇ  ತಂದೆ  ನೀವೇ  ನಮ್ಮಕಾಯುವ ದೈವ  ನೀವೇ
ನಿಮ್ಮ  ನಾಮಾಮೃತವ ಜಪಿಸಿ  ಚಿಂತೆಗಳನು  ಮರೆವೆ  ನಾನು  II ಶರಣು  II
kannada movie : poornima , singer : P susheela

Curtesy :
https://meerasubbarao.wordpress.com

ಆನೆ ಬಂದಿತಮ್ಮ

ಆನೆ ಬಂದಿತಮ್ಮ













ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಕಪಟನಾಟಕದ ಮರಿಯಾನೆ
ನಿಕಟ ಸಭೆಯಲಿ ನಿಂತಾನೆ
ಶಕಟನ ಭಂಡಿಯ ಮುರಿದಾನೆ
ಕಪಟನಾಟಕದಿಂದ ಸೋದರ ಮಾವನ
ನಕಟಕಟೆನ್ನದೆ ಕೊಂದಾನೆ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ನೀಲು ಭುವನವನು ಉಂಡಾನೆ
ಸ್ವಾಮಿ ಬಾಲಕನೆಂಬೋ ಚೆಲುವಾನೆ
ಬಲಗೋವುಗಳ ಕೂಡ ನಲಿದಾನೆ
ಚೆಲುವ ಕಾಳಿಂಗನ ಹೆಡೆಯಲಾಡುತ
ಪದಸೊಕ್ಕಿ ಬರುತಾನೆ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಭೀಮಾರ್ಜುನರನು ಗೆಲಿಸ್ಯಾನೆ
ಪರಮಭಾಗವತರ ಪ್ರಿಯದಾನೆ
ಮುದದಿಂದ ಮಧುರೆಲಿ ನಿಂತಾನೆ
ಮದಮುಖದ ಸುರರ ದಿಗಿಲಿಟ್ಟುಕೊಂಬ
ಪುರಂದರವಿಠ್ಠಲನೆಂಬಾನೆ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ತೊರೆದು ಜೀವಿಸಬಹುದೇ

ತೊರೆದು ಜೀವಿಸಬಹುದೇ 





ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....

ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು
ದಾಯಾದಿ ಬಂದುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನಡಿಯ ಬಿಡಲಾಗದು !! ೧ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!......

ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು
ಪಡೆದ ಕ್ಷೇತ್ರಗಳ ಬಿಟ್ಟು ಹೊರಡಬಹುದು!
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || ೨ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....

ಪ್ರಾಣವನ್ನು ಪರರು ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲೂ ಬಹುದು
ಪ್ರಾಣಧಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||೩||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!..........

ರಚನೆ : ಕನಕದಾಸರು

ಇಂದು ಎನಗೆ ಗೋವಿಂದ














ಇಂದು ಎನಗೆ ಗೋವಿಂದ


ಇಂದು ಎನಗೆ ಗೋವಿಂದ ನಿನ್ನಯ ಪಾದಾರ
ವಿಂದವ ತೋರೋ ಮುಕುಂದನೇ || ಪ ||
ಸುಂದರವದನನೇ ನಂದಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರೆರಮಣ || ಅ.ಪ ||
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನೆಂತೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪಜನಕನೇ || ೧ ||
ಮೂಢತನದಿ ಬಲು ಹೇಡಿಜೀವ ನಾನಾಗಿ
ದೃಢ ಭಕುತಿಯನ್ನು ಮಾಡಲಿಲ್ಲವೋ ಹರಿಯೆ
ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೋ ನಿನ್ನ || ೨ ||
ಧಾರುಣಿಯೊಳು ಬಲು ಭಾರ ಜೀವನನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೋ ಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ || ೩ ||

ತುಂಗಾತೀರ ವಿರಾಜಂ ಶ್ರೀಗುರು


ತುಂಗಾತೀರ ವಿರಾಜಂ ಶ್ರೀಗುರು
 ರಚನೆ : ಕಮಲೇಶದಾಸರು 

ತುಂಗಾತೀರ ವಿರಾಜಂ ಶ್ರೀಗುರು
ರಾಘವೇಂದ್ರ ಯತಿರಾಜಂ ಭಜಮನ ||
ಮಂಗಲಕರ ಮಂತ್ರಾಲಯವಾಸಂ
ಶೃಂಗಾರಾನನ ವಿಲಸಿತಹಾಸಮ್
ರಾಘವೇಂದ್ರ ಯತಿರಾಜಂ ಭಜಮನ ||೧||
ಕರಧೃತ ದಂಡ ಕಮಂಡಲ ಮಾಲಂ
ಸುರುಚಿರ ಚೇಲಮ್ ಧೃತ ಮಣಿ ಮಾಲಂ
ನಿರುಪಮ ಸುಂದರ ಕಾಯಂ ಸುಶೀಲಮ್
ವರಕಮಲೇಶಾರ್ಪಿತ ನಿಜ ಸಕಲಮ್
ರಾಘವೇಂದ್ರ ಯತಿರಾಜಂ ಭಜಮನ ||೨||



https://meerasubbarao.wordpress.com/2008/01/06/lyrics-for-thunga-theeravirajam-bhajamana/

ವಿನಾಯಕ ಸ್ತುತಿ

ವಿನಾಯಕ ಸ್ತುತಿ

ದೇವರಾಯನದುರ್ಗಕ್ಕೆ ನಡೆಯುವ ಹಾದಿಯಲ್ಲಿ ಸಿಗುವ ಗಣಪ 


ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಂಕಂ ವಿಲಾಸಿಲೋಕರಕ್ಷಕಮ್ |
ಅನಾಯಕೈಕನಾಯಕಂ ವಿನಾಶಿತೇಭ್ಯದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ || ೧ ||

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ |
ಸುರೇಶ್ವರಂ ನಿಧೀಶ್ವರಂ ಗಣೇಶ್ವರಂ ಮಹೇಶ್ವರಂ
ಗಜೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ || ೨ ||
ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ || ೩ ||

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಮ್ |
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ || ೪ ||
ನಿತಾಂತಕಾಂತಿದಂತಕಾಂತಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ || ೫ ||

ಮಹಾಗಣೇಶಪಂಚರತ್ನಮಾದರೇಣ ಯೋನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಮ್ |
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್ || ೬ ||


ನದೀ ಸ್ತೋತ್ರಂ

ನದೀ ಸ್ತೋತ್ರಮ್

ನದೀ ಸ್ತೋತ್ರಂ  ಪ್ರವಕ್ಷ್ಯಾಮಿ ಸರ್ವಪಾಪಪ್ರಣಾಶನಮ್ |
ಭಾಗೀರಥೀ ವಾರಣಾಸೀ ಯಮುನಾ ಚ ಸರಸ್ವತೀ || ೧ ||
ಫಲ್ಗುನೀ ಶೋಣಭದ್ರಾ ಚ ನರ್ಮದಾ ಗಂಡಕೀ ತಥಾ |
ಮಣಿಕರ್ಣಿಕಾ ಗೋಮತೀ ಪ್ರಯಾಗೀ ಚ ಪುನಃ ಪುನೀ || ೨ ||
ಗೋದಾವರೀ ಸಿಂಧುನದೀ ಸರಯೂರ್ವರ್ಣಿನೀ ತಥಾ |
ಕೃಷ್ಣವೇಣೀ ಭೀಮರಥೀ ಖಾಗಿನೀ ಭವನಾಶಿನೀ || ೩ ||
ತುಂಗಭದ್ರಾ ಮಲಹರೀ ವರದಾ ಚ ಕುಮುದ್ವತೀ |
ಕಾವೇರೀ ಕಪಿಲಾ ಕುಂತೀ ಹೇಮಾವತೀ ಹರಿದ್ವತೀ || ೪ ||
ನೇತ್ರಾವತೀ ವೇದವತೀ ಸುದ್ಯೋತೀ ಕನಕಾವತೀ |
ತಾಮ್ರಪರ್ಣೀ ಭರದ್ವಾಜಾ ಶ್ವೇತಾ ರಾಮೇಶ್ವರೀ ಕುಶಾ || ೫ ||
ಮಂದರೀ ತಪತೀ ಕಾಲೀ ಕಾಲಿಂದೀ ಜಾಹ್ನವೀ ತಥಾ |
ಕೌಮೋದಕೀ ಕುರುಕ್ಷೇತ್ರಾ ಗೋವಿಂದಾ ದ್ವಾರಕೀ ಭವೇತ್ || ೬ ||
ಬ್ರಾಹ್ಮೀ ಮಾಹೇಶ್ವರೀ ಮಾತ್ರಾ ಇಂದ್ರಾಣೀ ಅತ್ರಿಣೀ ತಥಾ |
ನಲಿನೀ ನಂದಿನೀ ಸೀತಾ ಮಾಲತೀ ಚ ಮಲಾಪಹಾ || ೭ ||
ಸಂಭೂತಾ ವೈಷ್ಣವೀ ವೇಣೀ ತ್ರಿಪಥಾ ಭೋಗವತೀ ತಥಾ |
ಕಮಂಡಲು ಧನುಷ್ಕೋಟೀ ತಪಿನೀ ಗೌತಮೀ ತಥಾ || ೮ ||
ನಾರದೀ ಚ ನದೀ ಪೂರ್ಣಾ ಸರ್ವನದ್ಯಃ ಪ್ರಕೀರ್ತಿತಾಃ |
ಪ್ರಾತಃಕಾಲೇ ಪಠೇನ್ನಿತ್ಯಂ ಸ್ನಾನಕಾಲೇ ವಿಶೇಷತಃ || ೯ ||
ಕೋಟಿಜನ್ಮಾರ್ಜಿತಂ ಪಾಪಂ ಸ್ಮರಣೇನ ವಿನಶ್ಯತಿ |
ಇಹಲೋಕೇ ಸುಖೀ ಭೂತ್ವಾ ವಿಷ್ಣುಲೋಕಂ ಸಗಚ್ಛತಿ || ೧೦ ||
|| ಇತಿ ನಾರದೀಯಪುರಾಣೇ ನದೀಸ್ತೋತ್ರಂ ಸಂಪೂರ್ಣಮ್ ||