ಭಳಿರೆ ಭಳಿರೆ ನಾರಸಿಂಹ 
ರಚನೆ : ವಿಜಯ ದಾಸರು 


ಶ್ರೀಲಕ್ಷ್ಮೀನರಸಿಂಹ ಗೊರವನ ಹಳ್ಳಿ ತುಮಕೂರು ಜಿಲ್ಲೆ 


ಭಳಿರೆ ಭಳಿರೆ ನಾರಸಿಂಹ | ಮಹಸಿಂಹ || 
ಮಲ ಮಲ ಮಲತವರ ವೈರಿ  ಉರಿಮಾರಿ ||ಪ|| 

ನಗ ನಗ ನಘಗಳಲ್ಲಡೆ ಚತುರ್ದಶ |
ಜಗ ಜಗ ಜಗವೆಲ್ಲ ಕಂಪಿಸಿ ಕೆಂಪಾಗೆ ||
ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ  ||1||

ಬಿಗಿ ಬಿಗಿ ಬಿಗಿ ಬಿಗಿದು ಹುಬ್ಬು ಗಂಟನೆ ಹಾಕಿ |
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ ||
ನೆಗ ನೆಗ ನೆಗ ನೆಗೆದು ಕುಪ್ಪಸ್ಳಿಸಿ ಅಸುರನ್ನ |
ಮಗು ಮಗು ಮಗು ಬೇಡಿ ಕೊಂಡ ನರಸಿಂಹ  ||2||

ಉಗು ಉಗು ಉಗುರಿಂದ ಕ್ರೂರನ್ನ ಹೇರೊಡಲ |
ಬಗೆ ಬಗೆ ಬಗೆ ಬಗೆದು ರಕುತವನ್ನು ||
ಉಗಿ ಉಗಿ ಉಗಿ ಉರಿದು ಚೆಲ್ಲಿ ಕೊರಳಿಗೆ ಕರುಳ |
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹ  ||3||

ಯುಗ ಯುಗ ಯುಗ ದೊಳಗೆ ಪ್ರಣತಾರ್ತಿ ಹರನೆಂದು |
ಝಗ ಝಗ ಝಗದೊಳಗೆ ಮುಕುಟ ತೂಗೇ ||
ನಗು ನಗು ನಗುನಗುತ ಸುರರು ಗಗನದಿನೆರೆದು |
ಮಿಗಿ ಮಿಗಿ ಮಿಗಿಲೆನೆ ನಾರಸಿಂಹ  ||4||

ಒಂದೊಂದಂದು ಮುನಿಗಳಿಗೆ ಒಲಿದು |
ಅಂದಂದಂದಂದಿಗಾಯುತ ಒಲಿದೇ ||
ಅಂದಂದಂದವಕಾವ ಚೂಳಂಗಿರಿ |
ಮಂದಿರನೆ ವಿಜಯ ವಿಠಲ ನಾರಸಿಂಹ  ||5||

No comments:

Post a Comment