ನಾನು ನನದೆನುವ ಮಾಯೆ (ಶ್ರೀನರಸಿಂಹ 15)
ನಾನು ನನದೆನುವ ಮಮಕಾರ ಬೆಳಸದಿರು ಜಗದಲ್ಲಿ
ದೇವನಿಗೆ ಸೇರಿದುದೆಲ್ಲ ನಿನದೆನ್ನುವುದು ಏನಿಲ್ಲ ಇಲ್ಲಿ
ಯಾತ್ರಿಕರು ನಾವುಗಳೆಲ್ಲ ಮುಕುತಿ ಗಳಿಸುವ ಪಥದಿ
ಎಲ್ಲ ಜೀವಿಗಳ ಸಮದೃಷ್ಠಿಯಲಿ ನೋಡು ಜೀವನದಿ
ಹಲವು ಜೀವಿಗಳ ಸೃಷ್ಠಿ ಅದು ದೇವನ ಇಚ್ಛೆಯಂತೆ
ಮಾನವ ಜನುಮ ಬಂದಿಹುದು ಮುಕ್ತಿ ಗಳಿಸಲಂತೆ
ಕುಕರ್ಮಗಳ ಮಾಡಿ ವ್ಯರ್ಥಗೊಳಿಸದಿರು ಜೀವನವ
ನಿಷ್ಕಾಮ ಸುಕರ್ಮಗಳಿಂ ಪಡೆ ಮುಕುತಿ ಮಾರ್ಗವ
ಕರ್ಮಗಳಿಗಂಟದಂತಿರು ತಾವರೆಲೆಯ ಮೇಲ ನೀರ ಹನಿಯಂತೆ
ಪಾಪ ಪುಣ್ಯಗಳೆಲ್ಲವ ಶ್ರೀನರಸಿಂಹಗರ್ಪಿಸಿ ಹೊಂದು ನೀ ನಿಶ್ಚಿಂತೆ

No comments:
Post a Comment