ದೇಹ ಮತ್ತು ಆತ್ಮ (ಶ್ರೀನರಸಿಂಹ 16)


ದೇಹ ಮತ್ತು ಆತ್ಮ (ಶ್ರೀನರಸಿಂಹ 16)



ಬಯಲಿನಲಿ ನಿರ್ಮಿಸಿರುವ  ಮನೆಯ ತೆರದಿ
ದೇಹವೇ ಮನೆಯು  ಆತ್ಮ ಬಯಲಿನೋಪಾದಿ
ಮನೆಗಳ ಒಳಹೊರಗೂ ಬಯಲು ಇರುವಂತೆ
ದೇಹಗಳ ಒಳ ಹೊರಗಿಹುದು ಆತ್ಮವು ಅಂತೆ

ತ್ರಿಗುಣಗಳಾಧಾರ ದೇವನ ಈ ಜಗದ ಸೃಷ್ಠಿ
ಎಲ್ಲರ ಒಳಗೆ ತುಂಬಿಹನು ಮಾಯೆಯ ದೃಷ್ಠಿ
ಮುಕುತಿಯ ಪಥದಲಿರು ಸಾಧನೆಯ  ನಡೆಸಿ
ಮನವ ಸೇರಿಸು ಆತ್ಮದಲಿ ತ್ರಿಗುಣಗಳ ತ್ಯಜಿಸಿ

ಆತ್ಮಕಿಲ್ಲವೋ ಹಾನಿ ದೇಹವೆನುವ ಮನೆಯಿದು ನಶಿಸಲು 
ನಂಬು ಶ್ರೀನರಸಿಂಹನನು ಇಹಪರದಲ್ಲಿ ಮುಕುತಿಗಳಿಸಲು

No comments:

Post a Comment