ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ
ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ
ಇಂದಾಗಿಹ ಘಟನೆಯಿಂದಲಿ ದುಃಖ ನಿನಗಾದರು
ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು
ನೀ ಬಯಸಿದುದನು ಬಯಸಿದಾಗಲೆ ನೀಡನವನು
ಬೇಡವೆನಿಸುವುದನೆ ನೀಡಿ ನಿನ್ನನವನು ಪರಿಕಿಪನು
ಶರಣಾಗು ಶ್ರೀಹರಿಗೆ ಬಯಕೆಗಳ ತ್ಯಜಿಸಿ ಮನದಿ
ರಕ್ಷಿಪನು ನಿನ್ನ ಮಾರ್ಜಾಲ ಮರಿಯ ರಕ್ಷಿಪ ತೆರದಿ
ನಿನ್ನ ಕರದಿ ದೇವನ ಕರ ಹಿಡಿದಿರಲು ಇಹುದು ಭಯವು
ಇಡೆ ಕರವನು ಶ್ರೀನರಸಿಂಹನ ಕರದೊಳಾಗ ಅಭಯವು
No comments:
Post a Comment