ಲಾಲಿಸಿದಳು ಮಗನ ಯಶೋದೆ

ರಚನೆ : ಪುರಂದರ ದಾಸರು



ಲಾಲಿಸಿದಳು ಮಗನ ಯಶೋದೆ 

ಲಾಲಿಸಿದಳು ಮಗನ 

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು 
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ|| ೧ 

ಬಾಲಕನೆ ಕೆನೆ ಹಾಲು ಮೊಸರನೀವೇ 
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು || ೨

ಮುಗುಳುನಗೆಯಿಂದ ಮುದ್ದು ತಾತಾರೆಂದು 
ಜಗದೊಡೆಯನೇ ಶ್ರೀಪುರಂದರ ವಿಠಲನ || ೩

No comments:

Post a Comment