Showing posts with label devotional. Show all posts
Showing posts with label devotional. Show all posts

ಓಂ ಪ್ರಥಮ ಪ್ರಣವನೆ


ಓಂ ಪ್ರಥಮ ಪ್ರಣವನೆ 
ಹಿಡಿದಕೆಲಸ ಬಿಡದೆ ಮಾಡುವ |
ಬಿಡದೆ ನಿನ್ನ ದ್ಯಾನ ಮಾಡುವ 
ಮನುಜಗೊಲಿಯೊ ಪರಶಿವನಸುತನೆ ||

ಪಾಶ ಅಂಕುಶ ಧಾರಿಯೆ
ದಿನಕರ ಸ್ವರೂಪಿಯೆ |
ಬಿಡದೆ ಪೊರೆಯೊ ದೀನರ 
ಮೋದಕಪ್ರಿಯ ಕೃಪಾಳುವೆ ||

ಮುರಿದ ದಂತ ಹಿಡಿದ ಹಾವು 
ಅರಿಯೆನಯ್ಯ ಇದರ ಮರ್ಮ |
ಭಕುತಿಯಿಂದ ತಿಳಿವು ಬೇಡುವೆ 
ತಿಳಿಸಿಹೇಳೊ ಅರಿವಿನೊಡೆಯ|| 

- ಪಾರ್ಥಸಾರಥಿ



ಲಘುಶಿವಸ್ತುತಿಃ






ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವಪದಂ ಸ್ಮರತಾ ಶಿವಮ್ |
ವಿಶದಕೋಟಿತಟಿತ್ಪ್ರಭಯಾ ಯುತಂ ಶಿವಜಯಾ ಶಿವಯಾ ಯುತಮ್ || ೧ ||
ನಟನನಾಟ್ಯನಟಂ ನಟಗಾಯಕಂ ಜನಮುದಂ ಜಲಜಾಯತಲೋಚನಮ್ |
ಭುಜಗಭೂಷಣಭೂಷಿತವಿಗ್ರಹಂ ಪ್ರಣಮ ಹೇ ಜನತೇ ಜನವಲ್ಲಭಮ್ || ೨ ||
ಶ್ರುತಿಶತಪ್ರಭಯಾ ಪ್ರಭಯಾ ಯುತಂ ಹರಿಪದಾಬ್ಜಭವಾಂ ಶಿರಸಾ ಧೃತಮ್ |
ಶಿವ ಶಿವೇತಿ ಶಿವೇತಿ ಶಿವೇತಿ ವೈ ಭವ ಭವೇತಿ ಭವೇತಿ ಭವೇತಿ ವಾ |
ಮೃಡ ಮೃಡೇತಿ ಮೃಡೇತಿ ಮೃಡೇತಿ ವೈ ಭಜತಿ ಯಃ ಸತತಂ ಪ್ರಣತಾಮಿಯಾತ್ || ೩ ||
|| ಇತಿ ಶ್ರೀವ್ಯಾಸತೀರ್ಥಯತಿಕೃತಾ ಲಘುಶಿವಸ್ತುತಿಃ ||

ಶರಣು ಶರಣಯ್ಯ ಶರಣು ಬೆನಕ

 ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ  
ಗರಿಗೆ ತಂದರೆ ನೀನು ….. 
ಗರಿಗೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳ

ಲಾಲಿಸಿದಳು ಮಗನ ಯಶೋದೆ

ರಚನೆ : ಪುರಂದರ ದಾಸರು



ಲಾಲಿಸಿದಳು ಮಗನ ಯಶೋದೆ 

ಲಾಲಿಸಿದಳು ಮಗನ 

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು 
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ||  

ಬಾಲಕನೆ ಕೆನೆ ಹಾಲು ಮೊಸರನೀವೇ 
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು || 

ಮುಗುಳುನಗೆಯಿಂದ ಮುದ್ದು ತಾತಾರೆಂದು 
ಜಗದೊಡೆಯನೇ ಶ್ರೀಪುರಂದರ ವಿಠಲನ || 

ನೋಡು ನೋಡು ಕಣ್ಣಾರ ನಿಂತಿಹಳು


ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು ಮಮತೆಯಿಂದ
ಬಾ ಇಲ್ಲಿ ಓ ಕಂದ ಎನುತಿಹಳೂ
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಷಾಸುರಮರ್ಧಿನಿಯ ವೈಭವ ಲೀಲೆ
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ನಂಬಿರುವ ಭಕ್ತರ ರಕ್ಷೆಗಾಗಿ 
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ಉಕ್ಕಿಬಹ ನದಿಯಲ್ಲೇ ಅವಳನಗೆ
ಬೀಸಿಬಹ ಗಾಳಿಯಲೇ ಅವಳುಸಿರು
ಹಸಿಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ
ನೋಡು ನೋಡು ಕಣ್ಣಾರ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು

ಸಾಹಿತ್ಯ:  ಆರ್. ಎನ್. ಜಯಗೋಪಾಲ್


ಬಾಲಕನಾಗಿ ಬಂದಾ ನೋಡು



ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ತುಂಗಾ ತೀರದಿ ಬಾಲಕ್ರಿಷ್ಣನು
ಕೊಳಲನೂದಲು ಮೋಹಗೊಂಡನು
ಎಲ್ಲ ಮರೆತು ಉಲ್ಲಾಸದಿಂದಲಿ
ಕಾಣಲೆಂದು ಓಡೋಡಿ ಬಂದನು

ಸಂಧ್ಯೆಯು ಆರತಿ ಎತ್ತಿರುವಾಗ
ತಣ್ಣನೆ ಗಾಳಿ ಬೀಸಿರುವಾಗ
ಮುರಳಿಲೋಲನ ಸ್ವರ ಕೇಳುತ
ಗೋವುಗಳು ತಲೆದೂಗಿರುವಾಗ

ರಾಘವೇಂದ್ರನ ಕಂಡ ಮುಕುಂದ
ಇಬ್ಬರ ಮನದಲು ಬಲು ಆನಂದ
ಒಬ್ಬರನೊಬ್ಬರು ಅಪ್ಪಿ ನಲಿದರು
ಸರಸವಾಡುವ ಸಂಭ್ರಮದಿಂದ

ಮುತ್ತು ರತ್ನದ ಹಾರ ಅವನಲಿ
ತುಳಸಿ ಮಣಿಗಳ ಮಾಲೆ ಇವನಲಿ
ಝಗ ಝಗಿಸುವ ಪೀತಾಂಬರವಲ್ಲಿ
ಬಾಲಯೋಗಿ ಸನ್ಯಾಸಿ ಉಡುಪಲಿ

ಬಾಲಕನಾಗಿ ಬಂದಾ ನೋಡು 
ರಾಘವೇಂದ್ರ ಬೃಂದಾವನದಿಂದ 

ಸಾಹಿತ್ಯ: ಚಿ. ಉದಯಶಂಕರ



ನಾರಾಯಣ ನಿನ್ನ ನಾಮದ ಸ್ಮರಣೆಯ


ನಾರಾಯಣ ನಿನ್ನ ನಾಮದ ಸ್ಮರಣೆಯ


ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ |
ಎಷ್ಟಾದರೂ ಮತಿಗೆಟ್ಟು ಇರಲಿ |
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾಮಂತ್ರ ಒಂದಿರಲಿ ||1||

ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಗದ ಒಳಗಿರಿಸಿ (ಒಳಗೆ ಇಟ್ಟು)
ಎಂತೋ ಪುರಂದರ ವಿಟ್ಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ ||2||

ಶರಣು ಗುರುರಾಜ

ಶರಣು  ಗುರುರಾಜ


ಶರಣು  ಗುರುರಾಜ  ಶರಣು  ರವಿ  ತೇಜ
ನಂಬಿದವರ  ಬೇಡಿಕೆಗಳ  ನೀಡುವಂಥ ಯೋಗಿ ರಾಜ  II ಪ  II
ತುಂಗಾ ನದಿಯ  ತೀರವಾಸಿ ವರಮಂತ್ರಾಲಯ  ತಾಪಸಿ
ಬೃಂದಾವನ  ಜ್ಯೋತಿ  ರೂಪ  ನೀವೇ  ನಮಗೆ ದಾರಿದೀಪ  II ಶರಣು  II
ಗುರುವು  ನೀವೇ  ತಂದೆ  ನೀವೇ  ನಮ್ಮಕಾಯುವ ದೈವ  ನೀವೇ
ನಿಮ್ಮ  ನಾಮಾಮೃತವ ಜಪಿಸಿ  ಚಿಂತೆಗಳನು  ಮರೆವೆ  ನಾನು  II ಶರಣು  II
kannada movie : poornima , singer : P susheela

Curtesy :
https://meerasubbarao.wordpress.com

ಬಿಲ್ವಾಷ್ಟಕo


ಬಿಲ್ವಾಷ್ಟಕo 

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ
ತವ ಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ ||
ಕೋಟಿಕನ್ಯಾ ಮಹಾದಾನಂ ತಿಲಪರ್ವತಕೋಟಯಃ
ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಂ ||
ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ ||
ಇಂದುವಾರೆ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಃ
ನಕ್ತಂ ಹೌಶ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ ||
ರಾಮಲಿಂಗ ಪ್ರತಿಷ್ಠಾ ಚ ವಿವಾಹಿತ ಕೃತಂ ತಥಾ
ತಟಾಕಾನಿ ಚ ಸಂಧಾನಂ ಏಕಬಿಲ್ವಂ ಶಿವಾರ್ಪಣಂ ||
ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಂ
ಕೃತಂ ನಾಮಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ ||
ಉಮಯಾ ಸಹ ದೇವೇಶ ನಂದಿವಾಹನಮೇವ ಚ
ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಂ ||
ಸಾಲಗ್ರಾಮೇಶು ವಿಪ್ರಾನಾಂ ತಟಾಕಂ ದಶಕೂಪಯೋಃ
ಯಜ್ಞಕೋಟಿ ಸಹಸ್ರಶ್ಚ ಏಕಬಿಲ್ವಂ ಶಿವಾರ್ಪಣಂ ||
ದಂತಿಕೋಟಿ ಸಹಸ್ರೇಶು ಅಶ್ವಮೇಧ ಶತಕ್ರತೌ
ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾನಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ಸಹಸ್ರವೇದಪಾಠೇಶು ಬ್ರಹ್ಮಸ್ಥಾಪನಮುಚ್ಯತೆ
ಅನೇಕವ್ರತಕೋಟೀನಾಂ ಏಕಬಿಲ್ವಂ ಶಿವಾರ್ಪಣಂ ||
ಅನ್ನದಾನ ಸಹಸ್ರೇಶು ಸಹಸ್ರೋಪನಯನಂ ತಥಾ
ಅನೇಕ ಜನ್ಮ ಪಾಪಾನಿ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ
ಶಿವಲೋಕಂ ಅವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ ||




ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ 
[Composed by – Sree Purandara Dasaru]

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ ||
ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ
ಗಜಚರ್ಮಾಂಬರಧರ ನಮೋ ನಮೋ || ಅ ಪ ||

ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || ೧ ||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ
ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ
ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || ೨ ||

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ
ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩||

ಭೋ ಶಂಭೋ ಶಿವ ಶಂಭೋ

ಭೋ ಶಂಭೋ ಶಿವ ಶಂಭೋ


ಭೋ ಶಂಭೋ ಶಿವ ಶಂಭೋ ಸ್ವಯಂಭೋ ||

ಗಂಗಾಧರ ಶಂಕರ ಕರುಣಾಕರ
ಮಾಮವ ಭವ ಸಾಗರ ತಾರಕ ||
ನಿರ್ಗುಣ ಪರಬ್ರಹ್ಮ ಸ್ವರೂಪ
ಗಮಾಗಮ ಭೂತ ಪ್ರಪಂಚ ರಹಿತ
ನಿಜಗುಹ ನಿಹಿತ ನಿತಾಂತ ಅನಂತ
ಆನಂದ ಅತಿಶಯ ಅಕ್ಷಯಲಿಂಗ ||೧||

ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂ
ತೋಂ ತೋಂ ತರಿಕಿಟ ತರಿಕಿಟ ಕಿಟತೊಂ
ಮತಂಗ ಮುನಿವರ ವಂದಿತ ಈಶ
ಸರ್ವ ದಿಗಂಬರ ವೇಷ್ಟಿತ ವೇಷ
ನಿತ್ಯ ನಿರಂಜನ ನಿತ್ಯ ನಟೇಶ
ಈಶ ಸರ್ವೇಶ ಸರ್ವೇಶ ||೩||

ಆನೆ ಬಂದಿತಮ್ಮ

ಆನೆ ಬಂದಿತಮ್ಮ













ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಕಪಟನಾಟಕದ ಮರಿಯಾನೆ
ನಿಕಟ ಸಭೆಯಲಿ ನಿಂತಾನೆ
ಶಕಟನ ಭಂಡಿಯ ಮುರಿದಾನೆ
ಕಪಟನಾಟಕದಿಂದ ಸೋದರ ಮಾವನ
ನಕಟಕಟೆನ್ನದೆ ಕೊಂದಾನೆ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ನೀಲು ಭುವನವನು ಉಂಡಾನೆ
ಸ್ವಾಮಿ ಬಾಲಕನೆಂಬೋ ಚೆಲುವಾನೆ
ಬಲಗೋವುಗಳ ಕೂಡ ನಲಿದಾನೆ
ಚೆಲುವ ಕಾಳಿಂಗನ ಹೆಡೆಯಲಾಡುತ
ಪದಸೊಕ್ಕಿ ಬರುತಾನೆ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ಭೀಮಾರ್ಜುನರನು ಗೆಲಿಸ್ಯಾನೆ
ಪರಮಭಾಗವತರ ಪ್ರಿಯದಾನೆ
ಮುದದಿಂದ ಮಧುರೆಲಿ ನಿಂತಾನೆ
ಮದಮುಖದ ಸುರರ ದಿಗಿಲಿಟ್ಟುಕೊಂಬ
ಪುರಂದರವಿಠ್ಠಲನೆಂಬಾನೆ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಳಿ ಕಡುಕೊಂಡು ಬಂತಮ್ಮ
ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ತೊರೆದು ಜೀವಿಸಬಹುದೇ

ತೊರೆದು ಜೀವಿಸಬಹುದೇ 





ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....

ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು
ದಾಯಾದಿ ಬಂದುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನಡಿಯ ಬಿಡಲಾಗದು !! ೧ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!......

ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು
ಪಡೆದ ಕ್ಷೇತ್ರಗಳ ಬಿಟ್ಟು ಹೊರಡಬಹುದು!
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || ೨ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....

ಪ್ರಾಣವನ್ನು ಪರರು ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲೂ ಬಹುದು
ಪ್ರಾಣಧಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||೩||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!..........

ರಚನೆ : ಕನಕದಾಸರು