ಬಯಕೆಗಳ ಮಾಯೆ (ಶ್ರೀ ನರಸಿಂಹ 34)


ರಚನೆ : ಸತೀಶ , ತುಮಕೂರು 
ಮನಸಿನಲಿ ಬರುವ ಬಯಕೆಗಳಿಗೆ ಮಿತಿ ಎಂಬುವುದಿಲ್ಲ
ಪಡೆಯಲಿಚ್ಛಿಸುವುದು  ಮನಸು ತಾ ಬಯಸಿದುದನೆಲ್ಲ
ಆಸೆ ಎಂಬುದು ಮದಿರೆಯೊಳು ತುಂಬಿಹ ನಶೆಯಂತೆ
ದಾಸನಾದರೆ ಇದಕೆ ಬಾಳಿನಲಿ ತಪ್ಪದು ನಿನಗೆ ಚಿಂತೆ

ಬಯಸಿದುದನೆಲ್ಲ ಪಡೆಯಲೇ ಬೇಕೆನುವ ಛಲವೇಕೆ
ಸಿಗದಿರಲು ಮನಸು ನಿರಾಸೆಯ ಹೊಂದುವುದೇತಕೆ
ಮಗುವಿಗೇನು ಬೇಕೆಂಬುದ ತಾಯಿ ತಿಳಿದಿರುವಂತೆ
ನರಹರಿಯೆ ಈಡೇರಿಸುವ ನಮ್ಮ ಬಯಕೆಗಳನಂತೆ

ಬಯಸಿದುದು ಸಿಗಲಿ,ಸಿಗದಿರಲಿ ಸಮಚಿತ್ತದಲವನು ಸ್ವೀಕರಿಸು
ನಿನಗೆ ಬೇಕಿಹುದೇನೆಂದರಿತಿಹ ಶ್ರೀನರಸಿಂಹನಲಿ ಮನಸನಿರಿಸು

1 comment:

  1. ಸುಂದರ ಭಾವ . ಭಕ್ತಿಯ ಶ್ರದ್ಧೆಯ ಭಾವ ಸೊಗಸಾಗಿದೆ. ಪ್ರಶ್ನೆಗಳು ಉತ್ತರಗಳು ಎಲ್ಲ ಒಳಗೊಂಡ ಸುಂದರ ಕವಿತೆ.

    ReplyDelete