ಮೋಹ ಬಯಕೆಗಳ ಮಾಯೆ -(ಶ್ರೀ ನರಸಿಂಹ 9)
ರಚನೆ : ಸತೀಶ್ ತುಮಕೂರು
ಮೋಹ, ಬಯಕೆಗಳ ಬಲೆಯಲ್ಲಿ ಸಿಲುಕಿಹೆವು ಜಗದಿ
ರೇಷಿಮೆಯ ಹುಳ ತಾ ಹೆಣೆದ ಗೂಡ ಸೇರಿದ ತೆರದಿ
ಸುಖ ದುಃಖಗಳುದ್ಬವಿಪುದು ಮೋಹ, ಬಯಕೆಗಳಿಂದ
ಜಗದಿ ನಡೆಯುತಿಹ ಕಲಹ, ಕದನಗಳೆಲ್ಲ ಇದರಿಂದ
ಕಾಳಿನಾಸೆಗೆ ಹಕ್ಕಿ ಬೇಡನ ಬಲೆಯಲ್ಲಿ ಬೀಳುವ ಹಾಗೆ
ಆಹಾರದಾಸೆಯಲಿ ಗಾಳಕೆ ಸಿಲುಕಿದ ಮೀನಿನ ಹಾಗೆ
ವಿಷಯಸುಖದ ಬೆನ್ನಟ್ಟಿ ದುಃಖ ಪಡುವುದು ಮನಸು
ಆದರೂ ಬಿಡದದು ಲೌಕಿಕದಲಿ ಸುಖವ ಪಡೆವ ಕನಸು
ಶಾಶ್ವತವಲ್ಲ ನಿನ್ನಿರಿವು ಇಲ್ಲಿ ವ್ಯಾಮೋಹವನು ಇರಿಸದಿರು ಜಗದಲ್ಲಿ
ಕೈಹಿಡಿದು ನಡೆಸುವನು ಮನಸನಿಡು ಶ್ರೀ ನರಸಿಂಹನಂಘ್ರಿಗಳಲ್ಲಿ
No comments:
Post a Comment