ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ರಚನೆ : ಸತೀಶ್ ತುಮಕೂರು
ರಚನೆ : ಸತೀಶ್ ತುಮಕೂರು
ಕಣ್ಣು, ನಾಸಿಕ, ಜಿಹ್ವೆ, ತೊಗಲು, ಕರ್ಣಗಳು
ಪಂಚೇಂದ್ರಿಯಗಳಿವು ಹುಚ್ಚು ತುರಗಗಳಂತೆ
ಮನಸ ಸೆಳೆದೊಯ್ಯುವುದು ತನ್ನಿಚ್ಛೆಯಂತೆ
ಸಾಧನೆಯ ಹಾದಿಯಲಿ ಇದುವೆ ಮುಳುವಂತೆ
ಇಂದ್ರಿಯಗಳ ಬಯಕೆಯದು ಅಲೆಗಳೋಪಾದಿ
ಮನವನಿರಿಸು ಅದರೆದುರು ಬಂಡೆಯ ತೆರದಿ
ಇಂದ್ರಿಯಗಳ ಇರಿಸಲೊಳಿತು ಮನಸಿನಾದೀನ
ಮನಸಿನ ಬಯಕೆಗಳಿಗೆ ಹಾಕು ನೀ ಕಡಿವಾಣ
ಸಂಯಮದಿ ಸನ್ಮಾರ್ಗದಲಿ ನಡೆದು ನೀ ಉತ್ತಮನೆನಿಸು
ಬಿಡದೆ ಸಲಹುವನು ಶ್ರೀ ನರಸಿಂಹ ನಂಬಿದರೆ ಮನಸು
No comments:
Post a Comment