ನಿಂತ ನೀರಾಗದಿರು ನೀನು ಸಾಧನೆಯ ಹಾದಿಯಲಿ
ನಿನ್ನಲ್ಪ ಮತಿಗೆ ತಿಳಿದುದನೆ ನೀ ಸತ್ಯವೆಂದೆನುತಲಿ
ಎಲ್ಲವನು ಅರಿತಿಹೆನೆಂಬಹಮಿಕೆಯಲಿ ಮೆರೆಯದಿರು
ಎಲ್ಲವನು ಜರಿಯುತಲೆಲ್ಲರನು ನೀ ನಿಂದಿಸದಿರು
ಎಲ್ಲದರಲಿ, ಎಲ್ಲರಲಿ ಸಮದೃಷ್ಠಿಯನು ಇರಿಸೆಂದು
ಗೀತೆಯಲಿ ಪರಮಾತ್ಮ ಶ್ರೀಕೃಷ್ಠ ನುಡಿದಿಹನಂದು
ತಿಳಿಯದಲೆ ವೇದ, ಗೀತೆಗಳ ಪೂರ್ಣ ಸಾರವನು
ಸರಿಯಿಲ್ಲವವೆನುತಲಿ ಜರಿಯದಿರು ಅವುಗಳನು
ಸುಡುವ ಬೆಂಕಿಯನೆ ಬೆಳಕೆನುತಲಿ ನಂಬದಿರು ನೀನು
ನಂಬು,ನಂಬದಿರು ಶ್ರೀ ನರಸಿಂಹ ಸಲಹುವನೆಲ್ಲರನು
No comments:
Post a Comment