ದೇಹವೆನ್ನುವ ಮಾಯೆ (ಶ್ರೀನರಸಿಂಹ 11)

ದೇಹವೆನ್ನುವ ಮಾಯೆ (ಶ್ರೀನರಸಿಂಹ 11)
ರಚನೆ : ಸತೀಶ್ ತುಮಕೂರು



ಕಳೆದು ಹೋಗುತಿಹುದಾಯುಷ್ಯ ದೇಹದಾರೈಕೆಯಲಿ
ದೇಹವನೇ  ತಾನೆಂದು  ಭ್ರಮಿಸುತ  ಮೂಡತೆಯಲಿ
ಶಾಶ್ವತವಲ್ಲದ  ದೇಹವಿದೆಂಬುದನು   ಮರೆಯುತಲಿ
ಲೌಕಿಕದಿ ಮುಳುಗಿಹೆವು ಸುಖ ಪಡೆವ ಬ್ರಾಂತಿಯಲಿ

ದೇಹವೆಂಬುದು  ಭವಸಾಗರದಲಿ  ದೋಣಿಯ ತೆರದಿ
ಮನಸು, ಬುದ್ದಿಗಳು ಆದ ನಡೆಸುವ ಹುಟ್ಟಿನೋಪಾದಿ
ದೇವ ನೀಡಿರುವ ಈ ದೇಹ  ಸಾಧನೆಗಾಗಿಯೆ ಎಂದು
ಹೊರಗಿಲ್ಲ ಸುಖ, ನೆಮ್ಮದಿ ಕಾಣು ನೀ ಒಳಗೆ ಬಂದು

ಬಾಳ್ವೆಯ  ನಡೆಸಬೇಕು  ಕೆಸರಿನಲುದ್ಬವಿಪ  ಕಮಲ ನೀನಾಗಿ
ನಂಬು ಭವದ ಸಾಗರ ದಾಟಿಸುವ ಶ್ರೀನರಸಿಂಹ ಅಂಬಿಗನಾಗಿ

No comments:

Post a Comment