ಜೀವನ ಎಂಬ ಮಾಯೆ (ಶ್ರೀನರಸಿಂಹ 12)

ಜೀವನ ಎಂಬ ಮಾಯೆ (ಶ್ರೀನರಸಿಂಹ 12)

ರಚನೆ : ಸತೀಶ್ , ತುಮಕೂರು 




ಹಲಸಿನ  ಹಣ್ಣೆಂಬುದನು  ಬಿಡಿಸಿದಂತೆ   ಜೀವನವು
ಅಂಟಿನೋಪಾದಿಯಲಿ   ಸಮಸ್ಯೆಗಳುದ್ಬವಿಸುವವು
ತೈಲವನು ಲೇಪಿಸೆ ಕರಗಳಿಗೆ  ಅಂಟು ಅಂಟದದು
ಸಮಸ್ಯೆಗಳನೆದುರಿಸೆ ತಾಳ್ಮಯೆ ತೈಲವಾಗಿಹುದು

ಪ್ರಾಪ್ತಕರ್ಮಗಳು  ದೈವೆಚ್ಛೆ  ಮಾಡಲೇಬೇಕಿಹುದು
ಕಾಮ್ಯ ಕರ್ಮಗಳೆಂಬುದದು  ನಿನ್ನಿಚ್ಛೆಯಾಗಿಹುದು
ಭೂತದಲಿ ನಡೆದು ಹೋದದನು ಬದಲಿಸಲಸಾಧ್ಯ
ಭವಿಷ್ಯವದು ಕೈಯಲ್ಲಿ ಸರಿದಾರಿಯಲಿರಲು ಸಾಧ್ಯ

ಮಾಡುವ  ಕರ್ಮಗಳನೆಲ್ಲ  ಮಾಡು  ದೈವ  ಪ್ರೇರಣೆಯನುತಲಿ
ಕೇಳದೆ ನಿನಗೆಲ್ಲಾ ನೀಡುವನು ಶ್ರೀ ನರಸಿಂಹ ನಿನ್ನಹರಸುತಲಿ

No comments:

Post a Comment