"ನಾನು" ಯಾರೆಂಬರಿವು (ಶ್ರೀ ನರಸಿಂಹ 13)

"ನಾನು" ಯಾರೆಂಬರಿವು (ಶ್ರೀ ನರಸಿಂಹ 13)

ರಚನೆ : ಸತೀಶ್ ತುಮಕೂರು



ದೇಹವೇ  ನಾನೆನುವ  ಭ್ರಮೆಯನು  ಬಿಡು  ಮರುಳೆ
ಉಸಿರು ನಿಲ್ಲಲಾಕ್ಷಣವೆ  ನಶಿಪುದು  ಕಾಯ  ಕೂಡಲೆ
ಮನಸು,ಬುದ್ದಿಗಳೆ ನಾನೆಂಬುದದುವು ಮೂಡತೆಯು
ಕಾಯವಳಿಯಲದರೊಂದಿಗಳಿವ  ತರಂಗಗಳು ಅವು
ದೇಹದ  ಸುಖವೆಂಬುದದು  ಕ್ಷಣಿಕ  ಸುಖವಾಗಿಹುದು
ದೇಹ ನಾನಲ್ಲೆಂಬರಿವೆ  ಶಾಶ್ವತ  ಸುಖವೆನಿಸುವುದು
ಮನಸ ನಿಗ್ರಹಿಸುವುದಕೆ ಎಲ್ಲ  ಸಾಧನೆಗಳ  ಪಥವು
ಮನಸ  ಲಯಗೊಳಿಸು  ಅದುವೆ  ಸಮಾದಿ ಸ್ಥಿತಿಯು
ನಾನಾರೆಂಬುದನು   ಅರಿಯಬೇಕು ನೀ ಒಳಗಣ್ಣ ತೆರೆಯುತಲಿ
ಎಲ್ಲರೊಳಗಿಹ ಪರಮಾತ್ಮ ಶ್ರೀನರಸಿಂಹ ನಾನೆಂಬ ರೂಪದಲಿ

No comments:

Post a Comment