Showing posts with label 2017. Show all posts
Showing posts with label 2017. Show all posts

ಓಂ ಪ್ರಥಮ ಪ್ರಣವನೆ


ಓಂ ಪ್ರಥಮ ಪ್ರಣವನೆ 
ಹಿಡಿದಕೆಲಸ ಬಿಡದೆ ಮಾಡುವ |
ಬಿಡದೆ ನಿನ್ನ ದ್ಯಾನ ಮಾಡುವ 
ಮನುಜಗೊಲಿಯೊ ಪರಶಿವನಸುತನೆ ||

ಪಾಶ ಅಂಕುಶ ಧಾರಿಯೆ
ದಿನಕರ ಸ್ವರೂಪಿಯೆ |
ಬಿಡದೆ ಪೊರೆಯೊ ದೀನರ 
ಮೋದಕಪ್ರಿಯ ಕೃಪಾಳುವೆ ||

ಮುರಿದ ದಂತ ಹಿಡಿದ ಹಾವು 
ಅರಿಯೆನಯ್ಯ ಇದರ ಮರ್ಮ |
ಭಕುತಿಯಿಂದ ತಿಳಿವು ಬೇಡುವೆ 
ತಿಳಿಸಿಹೇಳೊ ಅರಿವಿನೊಡೆಯ|| 

- ಪಾರ್ಥಸಾರಥಿ



ರುದ್ರವೀಣೆಯು ಈ ದೇಹ

ರುದ್ರವೀಣೆಯು ಈ ದೇಹ 
ನುಡಿಸುವ ರಾಗ ನಿನ್ನದೇ ಭಾವ !

ಶೃತಿ ಅಪಶೃತಿಗಳ ಚಿಂತೆ ನನಗಿಲ್ಲ
ನುಡಿಸುವನೇ ಬಾಧ್ಯ, ನಿನ್ನದೇ ಎಲ್ಲ !

ರಾಗವೋ ಅನುರಾಗವೋ 
ಭೂತಿಯೋ ಅನುಭೂತಿಯೋ
ಆದಿ ಅಂತ್ಯಗಳಿಲ್ಲದ ವಾದ
ಸೇರುವುದೆಲ್ಲವೂ ನಿನ್ನದೇ ಪಾದ

- ಪಾರ್ಥಸಾರಥಿ

ಶ್ರೀ ಗಣೇಶ



ಶ್ರೀ ಗಣೇಶ ,    ಶ್ರೀರಾಮ ದೇವಾಲಯ , ದೊಡ್ಡನಾರವಂಗಲ ಗ್ರಾಮ , ತುಮಕೂರು ಜಿಲ್ಲೆ