ಒಳ್ಳೆಯದು - ಕೆಟ್ಟದ್ದು (ಶ್ರೀನರಸಿಂಹ 20)
ರಚನೆ :ಸತೀಶ್ ತುಮಕೂರು
ರಚನೆ :ಸತೀಶ್ ತುಮಕೂರು
ಶ್ರೀ ಭೋಗಾನರಸಿಂಹ, ದೇವರಾಯನದುರ್ಗ,ತುಮಕೂರು
ಒಳ್ಳೆಯದಕೆ ಬೆಲೆ ಬರಲು ಕೆಟ್ಟದೆಂಬುದಿರಬೇಕು
ಸುಖವೆನೆಂಬುದನು ಅರಿಯಲು ಕಷ್ಟ ಬರಲೇಬೇಕು
ಒಳ್ಳೆಯದೇ,ಸುಖವೆ ಎಲ್ಲಡೆ ಇರೆ ಏನಿದೆ ಸೊಗಸು
ಅದಕಾಗಿ ದೇವನು ಸೃಷ್ಠಿಸಿಹ ವಿಧ ವಿಧದ ಮನಸು
ಒಳ್ಳೆಯದೋ,ಕೆಟ್ಟದೋ ಸಮಚಿತ್ತದಲಿ ಸ್ವೀಕರಿಸು
ಎಲ್ಲದರಲಿ, ಎಲ್ಲರಲಿ ಸಮದೃಷ್ಠಿಯನು ನೀ ಇರಿಸು
ಕಷ್ಟ, ಕೇಡುಗಳೆಂಬುವವು ಸಾಧನೆಯ ಸೋಪಾನ
ಎದುರಿಸಿ ನಿಲ್ಲಬೇಕಿದವುಗಳನು ಪಕ್ವವಾಗಲು ಮನ
ಕೊಳೆ ತುಂಬಿರುವ ಕೊಳದಂತೆ ಮನ,ಶುದ್ದಗೊಳಿಸಬೇಕದನು
ತಿಳಿ ನೀನು ಎಲ್ಲದಕೂ ಶ್ರೀನರಸಿಂಹನೇ ಪ್ರೇರಕನು ಕಾರಕನು
No comments:
Post a Comment