ಸಿದ್ದಿಗಳ ಮಾಯೆ (ಶ್ರೀನರಸಿಂಹ 21)


ಸಿದ್ದಿಗಳ ಮಾಯೆ (ಶ್ರೀನರಸಿಂಹ 21)
ರಚನೆ : ಸತೀಶ್ ತುಮಕೂರು
ಲಕ್ಷ್ಮೀ ನರಸಿಂಹ , ವಿಘ್ನಸಂತೆ, ನೊಣವಿನಕೆರೆ ತಾ! ತುಮಕೂರು ಜಿಲ್ಲೆ 


ಸಿದ್ದಿಗಳೆಂಬುದನು ಪಡೆಯುವುದೇ ಸಾಧನೆಯೇನಲ್ಲ
ಅಷ್ಠ ಸಿದ್ದಿಗಳ ಪಡೆದರೂ ಮುಕುತಿ ದೊರಕುವುದಿಲ್ಲ
ಸಿದ್ದಿಗಳು ಸಿದ್ದಿಸಿತೆಂದು ಸಾಧನೆಯನು ನಿಲಿಸದಿರು
ಸಾಧನೆಯ ಹಾದಿಯಲಿವು ತಡೆ ಎಂಬುದನರಿತಿರು


ಅಣಿಮಾ,ಮಹಿಮಾ ,ಗರಿಮಾ ,ಲಫಿಮಾ,ಪ್ರಾಪ್ತಿ
ಪ್ರಕಾಮ್ಯ, ಈಶಿತ್ವ, ವಶಿತ್ವಗಳೆಂಬಷ್ಟಸಿದ್ದಿಗಳಿವು
ಸಾಧನೆಯ ಹಾದಿಯಲಿ ಪರೀಕಿಪಲು ಸಿದ್ದಿಸುವವು
ಸಿದ್ದಿಗಳ ಮಾಯೆಗೊಳಗಾಗಿ ಗುರಿಯ ಮರೆಯದಿರು


ಆತ್ಮ ಸಾಕ್ಷಾತ್ಕರ ಪಡೆಯುವುದೇ ಸಾಧನೆಗೆ ಗುರಿಯಾಗಬೇಕು
ಸಿದ್ದಿಗಳನೆಲ್ಲ ಶ್ರೀನರಸಿಂಹಗರ್ಪಿಸಿ ಗುರಿಯಡೆಗೆ ಸಾಗಬೇಕು

No comments:

Post a Comment