ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....
ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು
ದಾಯಾದಿ ಬಂದುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನಡಿಯ ಬಿಡಲಾಗದು !! ೧ ||
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!......
ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು
ಪಡೆದ ಕ್ಷೇತ್ರಗಳ ಬಿಟ್ಟು ಹೊರಡಬಹುದು!
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || ೨ ||
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!....
ಪ್ರಾಣವನ್ನು ಪರರು ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲೂ ಬಹುದು
ಪ್ರಾಣಧಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||೩||
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!..........
ರಚನೆ : ಕನಕದಾಸರು

ಧನ್ಯವಾದಗಳು
ReplyDeleteಇದರ ಸಾರಾಂಶ bidri
DeleteNicr
ReplyDeleteedr ಸಾರಾಂಶ bidre
DeleteSarsa
DeleteNice
ReplyDeleteಕರಪಿಡಿದೆನ್ನು ಕಾಯೋ ಕರುಣಾ ನಿದಿಯೆ
ReplyDeleteಚೆನ್ನಾಗಿದೆ
ReplyDeleteಅದ್ಭುತವಾದ ಸಂಯೋಜನೆ, ಅರ್ಥವತ್ತಾದ ಹಾಡು, ಗಾಯನಕ್ಕೆ ಸ್ಪೂರ್ತಿ ಕೊಡುವ ಗೀತ ರಚನೆ
ReplyDeleteEdar saramsha bidri
ReplyDelete🙏🙏🙏🙏🙏
ReplyDeleteಕಾಯಜಾ ಪಿತ
ReplyDeleteಕಾಯ ಜಾಪಿತ ಅಲ್ಲ
ಮತ್ತೂ ಕೆಲವು ತಪ್ಪು ಇದೆ